ಶನಿವಾರ, ಫೆಬ್ರವರಿ 21, 2009

Sri Raghavendrashtaka

ಶ್ರೀ ಕಲ್ಲಾಪುರ ಅಣ್ಣಯ್ಯಾಚಾರ್ಯ ಕೃತ ಅಶ್ವಧಾಟಿ ಶ್ರೀ ರಾಘವೇಂದ್ರಾಷ್ಟಕ 

[ಈ ಸ್ತೋತ್ರವನ್ನು ರಚಿಸಿದವರು ಶ್ರೀ ಕಲ್ಲಾಪುರ ಅಣ್ಣಯ್ಯಾಚರ್ಯರು ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದವರು. ಒಂದು ಕಾಲದಲ್ಲಿ ವಿದ್ವಾಂಸರು, ಪಂಡಿತರು ಹಾಗೂ ಭಕ್ತವರ್ಗದವರು ಮೆಚ್ಚಿ ಪಠಿಸುತ್ತಿದ್ದರು. ಈ ಸ್ತೋತ್ರವನ್ನು ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯರು ಮತ್ತು ದಿ।। ಎಸ್ . ಜಿ. ಮಧ್ವಾಚಾರ್ಯರು ಪರಿಷ್ಕರಿಸಿದ್ದರು. ಪ್ರಕಾಂಡಪಂಡಿತರೂ ಗುರು ಸಾರ್ವಭೌಮರ ಪರಮ ಭಕ್ತರು ಆದ ಶ್ರೀ ವೇ।। ಮ।। ಸಂ ।। ಚಿಕ್ಕೇರೂರು ಗೋವಿಂದಾಚಾರ್ಯರು ಮತ್ತಷ್ಟು ಶುದ್ಧಗೊಳಿಸಿರುವುದಲ್ಲದೆ ಪ್ರತಿ ಶ್ಲೋಕಕ್ಕೂ ಸೂಕ್ತ ತಾತ್ಪರ್ಯ ರಚಿಸಿ ಕೊಟ್ಟಿದ್ದಾರೆ  ]

ಶ್ರೀ ರಾಘವೇಂದ್ರ ಮುನಿ ವಾರೇಂದ್ರ ಸಂವಿನುತ ಮಾರಾರಿ ಮಸ್ತಕನದೀ 
ಪೂರಾಮ ಲೋತ್ತಮ ಸುಗೀರಾಕುವಾದಿ ಮದ ವಾರಾಪಹಾರಕಗುರೋ 
ಘೋರಾಭಿದಾಗಮ ನಿವಾರೈಕದೀಕ್ಷಪರ ಮಾರಾಧಿ  ತಾಂಘ್ರಿಯುಗಳಂ 
ಶ್ರೀರಾಮಚಂದ್ರಮಲ ಮಾರಾಧಯನ್ ಪ್ರತಿವರಾರಾಧ್ಯ ಮಾಮವ ಸದಾ ।।೧।।

ತಾತ್ಪರ್ಯ :
ಅನೇಕ ಶ್ರೇಷ್ಠ  ಮುನಿವೃಂದಗಳಿಂದ ಸ್ತುತ್ಯಮಹಿಮರಾದ, ಗಂಗಾ ನದಿಯಂತೆ ಪವಿತ್ರವೂ ಗಂಭೀರವೂ ಆದ ವಾಕ್ಯಗಳಿಂದ ವಾದಿನಿಗ್ರಹ ಕುಶಲರಾದ, ಪರಮತಖಂಡನ  ದೀಕ್ಷಾ ದುರಂಧರರಾದ, ಪರಮಭಕ್ತಿಯಿಂದ ಶ್ರೀರಾಮ ಪೂಜಾನಿರತರಾದಂತಹ ಶ್ರೇಷ್ಠ ಸಂನ್ಯಾಸಿಗಳಿಂದ ಆರಾಧ್ಯರಾದ ಗುರುವರ್ಯರು ನಮ್ಮನ್ನು ರಕ್ಷಿಸಲಿ.


ಮಂತ್ರಾಲಯೋಲ್ಲಸಿತ ತಂತ್ರಾಳಿ ದೀಪಕರ ಮಾಂತ್ರಾಹಿ ಸರ್ವಸುಗುರೋ 
ಸಂತ್ರಾಣ ಸಂನಿಕರ ಮಾಂತ್ರಾತು ಮತ್ರಕಿಮು ಮಂತ್ರಾಂಬುಧೇ ನಹಿಬಲಂ 
ತಂತ್ರಂ ಹರೇರ್ಜಗದ, ತಂತ್ರೋಶ್ಯಸೋಯಮಿತಿ, ತಂತ್ರೋಕ್ತಿಭಿಶ್ಚಕುಮತೀನ್ 
ಸಂತ್ರಾಸಯನ್ನಿಖಿಳ ಯಂತ್ರಾಸು ನೇರಿತ ಸುತಂತ್ರಾದಿ ಭಾವ ವಿಮಲಂ ।।೨।।

ತಾತ್ಪರ್ಯ :
ಮಂತ್ರಾಲಯದಲ್ಲಿ ಶೋಭಿಸುತ್ತಿರುವ,  ತಂತ್ರದೀಪಿಕಾ, ಭಾವದೀಪಿಕಾದಿ ಗ್ರಂಥಕರ್ತರೂ ಆಶ್ರಿತ ರಕ್ಷಣಾನುಕೂಲ  ಸಾಮಗ್ರಿಯುಕ್ತರೂ ಮಂತ್ರ ಜಲನಿಧಿಗಳು ಅದ ನಿಮಗೆ ನನ್ನನ್ನು ರಕ್ಷಿಸಲು ಬಲವಿಲ್ಲವೇ? (ಸ್ವಾಮಿ ರಕ್ಷಿಸಿ) ಜಗತ್ತುಶ್ರೀಹರಿ ಅಧೀನ ಎಂಬುದನ್ನು ಸಿದ್ಧಾಂತೋಕ್ತಿಗಳಿಂದ ನಿರ್ಣಯಿಸಿ ವಾದಿಗಳನ್ನು ನಿಗ್ರಹಿಸಿದಂತಹ ಮತ್ತು ಶ್ರೀ ವಾಯುದೇವರ ಸಿದ್ಧಾಂತದಿಂದ ಪ್ರಮೇಯರಹಸ್ಯಗಳನ್ನು ಅರಿತಂತಹ ನಿರ್ಮಲ ಜ್ಞಾನಿಗಳಾದ ಶ್ರೀಗಳು ನಮ್ಮನ್ನು ರಕ್ಷಿಸಲಿ.

ಶ್ಯಾಮಾವದಾತ ಶುಭ ರಾಮಾಂಘ್ರಿ ಸಾರಸ ಸುಧಾಮಾಯ ಮಾನಹೃದಯಂ 
ಕೋಮಾನವೋ ಭಜತಿ ನಾಮಾನಿ ಪಾಪಹರ ನಮನ ಮೇನಮನಘಂ 
ಶ್ರೀಮಾನ ಯಂದಿಶತು  ಸೋಮಾನನಃ ಸುಖಮ ಮಾನಂಸದಾಯತಿಪತಿಃ 
ಪ್ರೇಮಾತಿ ಭಾರಧರ ಬಹುಮಾನ ವದ್ಯಮತಿ ಧಾಮಾದಿ ಸದ್ಗುಣಗಣಃ ।।೩।।

ತಾತ್ಪರ್ಯ :
ಶ್ರೀರಾಮ ದೇವರ (ಪಾದಪದ್ಮಗಳಿಗೆ ಜನ್ಮ ಸ್ಥಳವಾದ ಸರೋವರ ಪ್ರಾಯ ಹೃದಯವುಳ್ಳ ) ಪಾದಪದ್ಮಗಳನ್ನು ಸದಾ ಧ್ಯಾನಿಸುವ, ಪಾಪಲೇಪವಿಲ್ಲದ, ಸಕಲ ಪಾಪಹರ ಎಂಬ ಅರ್ಥವುಳ್ಳ "ಶ್ರೀರಾಘವೇಂದ್ರ " ಎಂಬ ನಾಮವುಳ್ಳ, ನಿಮ್ಮನ್ನು ಯಾವ ಮಾನವನು ತಾನೇ ಭಜಿಸಲಿಕ್ಕಿಲ್ಲ ? ಚಂದ್ರನಂತೆ ಆಹ್ಲಾದಕರವೂ ಶಾಂತವೂ ಆದ ಮುಖವುಳ್ಳ ಗುರುಗಳು ನಮಗೆ    ಅಪರಿಮಿತ ಸುಖವನ್ನೀಯಲಿ.

ಕಾಮಾರಿ ವನ್ನಿಹಿತ ಕಾಮಂಸದಾಸುಜನ ಕಾಮಾದಿ ದಾನನಿಪುಣಂ 
ಹೇಮಾನವಾ  ಭಜತಿ, ಸಾಮಾದಿ  ವೇದನುತ ಭೂಮಾಧವಂ ಗುರುವರಂ 
ಸೀಮಾತಿ ರೇಕಮದ ಧೀಮಾಯ ದರ್ಪತೃಣ ಧೂಮಾಗ್ನಿ ಕಲ್ಪಸುಗಿರಂ 
ಹೇಮೋದರಪ್ರತಿಮ ಧಾಮನ ಮಾಶುನಮ ಮೇ ಮಾನ ಸಾತಿ ಕರುಣಂ ।।೪।।

ತಾತ್ಪರ್ಯ:
ಪಾರ್ವತೀಶನಾದ ಶಂಭುವಿನಂತೆ ಅರಿಷಡ್ವರ್ಗಗಳನ್ನು ಗೆದ್ದಂಥ , ಅಪೇಕ್ಷಿತ ಪ್ರದಾತೃಗಳಾದಂಥ,  ಸಾಮಾದಿ ಚತುರ್ವೇದಗಳಿಂದ ಶ್ರೀ ಲಕ್ಷ್ಮೀಪತಿಯನ್ನು ಸ್ತುತಿಸುತ್ತಿರುವಂಥ ಗುರುವರ್ಯರನ್ನು ನಮಸ್ಕರಿಸಿರಿ. ನಿಃಸ್ಸೀಮ ಸಂಖ್ಯಾತ ಮಾಯಾವಾದಿಗಳ ಮದವೆಂಬ ತೃಣಕ್ಕೆ ಕಿಚ್ಚಿನಂತಿರುವ ವಾಕ್ಪ್ರತಾಪವುಳ್ಳಂಥ, ಸತ್ಯಲೋಕದಂತೆ ಪ್ರಕಾಶಿಸುವ ಸಂಸ್ಥಾನ ಪ್ರದೇಶ (ಮಠ ) ಉಳ್ಳಂಥ ಗುರುಗಳನ್ನು ನಮಿಸಿರಿ.

ಮನ್ಯಾಮ ಹೇಸುಮತಿ ಧನ್ಯಾನ್ಯದೀಯಬುಧ ಮಾನ್ಯಾಂಘ್ರಿ ಪೂಜನರತಾನ್ 
ಅನ್ಯಾನಮಾನ್ಯ ಜಡವನ್ಯಾವನೀಜ ಪಶುಜನ್ಯಾಸಮಾನ ಕುಜನೀ
ದುರ್ನ್ಯಾಯವಾದಿಕುಲ ಜನ್ಯೇಗಿರಾಮಿಹಸುಜನ್ಯೇ ರತನ್ ವರಗುರೂನ್ 
ಸ ನ್ಯಾಯ ಸಂವಿಜಿತ ದುರ್ನ್ಯಾಯಯೋಧವರ ಮಾನ್ಯಾನ್ನಮೋಯತಿವರಾನ್  ।।೫।।